|
ಕೆಲವು ಸಾಮನ್ಯ ಕೀಲಿ ಅಡ್ಡದಾರಿ (Shortcut keys) ಗಳು
|
1 |
ಹೊಸ ಖಾಲಿ ಕಿಡಕಿ |
New Tab |
Ctrl + T |
|
೨ |
ಕಡತವನ್ನ ತೆರೆ |
Open a file |
Ctrl + O |
|
3 |
ಒಂದು ಕಿಡಕಿಯನ್ನ ಮುಚ್ಚು. |
(Close Tab) |
Ctrl + Q |
|
4 |
ಭಾಷೆ ಬದಲಿಸು |
Toggle Language |
Ctrl + G |
|
5 |
ಕೀಲಿ ಮಣೆ ಮಾದರಿ ಬದಲಿಸು |
Toggle keyboard Layout |
Ctrl + K |
|
6 |
ಪದ ಹುಡುಕು ಹಾಗೂ ಬದಲಿಸು |
Find and Replace |
Ctrl + F |
|
7 |
ಕಡತವನ್ನ ಉಳಿಸು |
Save file |
Ctrl + S |
ಲೋಹಿತಂತ್ರಾಂಶದಲ್ಲಿ ಆನ್ಸಿ (ANSI, ಕಂಗ್ಳೀಷ್ ) ನಲ್ಲಿ ಬರೆಯುವುದು ಹೇಗೆ? ಎಂದು ತಿಳಿದಿಲ್ಲದಿದ್ದರೆ ಈ ಕೆಳಗಿನ ಮಾಹಿತಿಯು ನಿಮಗೆ ಉಪಯುಕ್ತವಾಗ ಬಲ್ಲದು.
1. ಮೊಟ್ಟಮೊದಲು ಮುಖ್ಯಕಿಡಕಿ (ಮೈನ್ ವಿಂಡೋ) ಯ ಕೆಳಗಿನ ಸಾಲಿನಲ್ಲಿ ಕಂಡು ಬರುವ ನೀಲಿ ಬಣ್ಣದಲ್ಲಿ ರಚಿಸಿರುವ "ಉತ್ತರ ದಿಕ್ಕಿ" (Up Arrow) ಗೆ ತೋರಿಸುತ್ತಿರುವ ಬಾಣದ ಗುರ್ತಿನ ಗುಂಡಿಯನ್ನ ಚುಚ್ಚಿ.
2. ಮುಖ್ಯ ಕಿಡಕಿಯು ಈಗ ನೀವು ನೋಡುತ್ತಿರುವಂತೆ ಎರ್ಡು ಭಾಗಗಳಾಗಿ ವಿಭಜನೆಯಾಗುತ್ತೆ
1. ಮೇಲಿನದು ಯೂನಿಕೋಡ್ ಕನ್ನಡ ಕಿಡಕಿ.
2. ಕೆಳಗಿನದು ಆನ್ಸಿ(ANSI) ಕನ್ನಡ ಕಿಡಕಿ.
3. ಈ ಕಂಗ್ಲೀಷ್ ಕಿಡಕಿಯನ್ನ ಮುಚ್ಚಿ ನೇರವಾಗಿ ಯೂನಿಕೋಡ್ ಕಿಡಕಿಗೆ ಹಿಂದಿರುಗಲು ಈ ಹಿಂದೆ ಚುಚ್ಚಿದ್ದ ಗುಂಡಿಯನ್ನೇ ಮತ್ತೊಮ್ಮೆ ಚುಚ್ಚಿ.(ದಕ್ಷಿಣ ದಿಕ್ಕಿಗೆ ತೋರಿಸುತ್ತಿರುವ ನೀಲಿ ಬಾಣದ ಗುಂಡಿ).

4. ಈಗ ದೊಡ್ಡ ಕಿಡಕಿಯ ಮೇಲರ್ಧದಲ್ಲಿ ಕಾಣಿಸುತ್ತಿರುವ ಕನ್ನಡವು ಯೂನಿಕೋಡ್ ನಲ್ಲಿ ಮೂಡಿರುತ್ತದೆ.
5. ಈ ಕೆಳಭಾಗದ ಕಿಡಕಿಯಲ್ಲಿ ಬರೆದಿರುವ ಕಂಗ್ಲೀಶ್ ಅಥ್ವ ಆನ್ಸಿ ಪಠ್ಯವನ್ನ ಸಹ ಉಳಿಸಿಕೊಳ್ಳಬಹುದು. ಹೇಗೆಂದರೆ
ಮೇಲೆ ಸೂಚಿಸಿರುವ ಗುಂಡಿಗಳ ಗುಂಪಿನಲ್ಲಿ (Button Group) ನಲ್ಲಿ "ಪ್ಲಾಪಿ ಡಿಸ್ಕ್" (Floppy Disk) ಚಿಹ್ನೆ ಇದೆಯಲ್ಲ? ಅದನ್ನ ಒತ್ತಿ.
6. ನಂತರ ನಿಮಗೆ ಬೇಕಾದ ಹೆಸರಿನ ಕಡತವನ್ನ ಆಯ್ಕೆಮಾಡಿಕೊಂಡರೆ ಎಂದಿನಂತೆ ನಿಮ್ಮ ಕಡತ ಸಿದ್ದ.
ಈಗ "ಬರಹ"ದಲ್ಲಿ ಸಹ ಈ ಕಡತವನ್ನ ತೆರೆಯಬಹುದು.
7. ಅಲ್ಲದೇ ಇದೇ ರೀತಿ "ಬರಹ"ದಲ್ಲಿ ಸಿದ್ದ ಪಡಿಸಿದ್ದ BRH ಕಡತಗಳನ್ನ ತೆರೆದು ಎಡಿಟ್ ಮಾಡಬಹುದು.
ಹೇಗೆಂದರೆ, ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಹಳದಿ ಬಣ್ಣದ "ಪೊಲ್ಡರ್" ಗುಂಡಿಯನ್ನ ಒತ್ತಿ.
ಆಗ ನೀವು "BRH" ಕಡತಗಳನ್ನ ಆಯ್ಕೆಮಾಡಿಕೊಳ್ಳ ಬಹುದು.
8. ಈ ಆನ್ಸಿ(ANSI) ಕನ್ನಡ (ಕಂಗ್ಲೀಶ್) ಕಿಡಕಿಯನ್ನ ಯೂನಿಕೋಡ್ ಕಿಡಕಿಯ ಕೆಳಗೆ ತೆರೆಯುವ ಬದಲು, ಯೂನಿಕೋಡ್ ಕನ್ನಡ ಕಿಡಕಿಯ ಬಲಪಕ್ಕಕ್ಕೆ ಬರುವಂತೆ ಮಾಡಲು ಸಹ ಸಾದ್ಯವಿದೆ. ಮೇಲೆ ಸೂಚಿಸಿರುವ ಗುಂಡಿಗಳ ಗುಂಪಿನಲ್ಲಿ "ಅಡ್ಡಡ್ಡ"ದ ಎರ್ಡೂ ದಿಕ್ಕಿನ ಬಾಣದ ಗುರ್ತಿನ ಗುಂಡಿಯನ್ನು ಚುಚ್ಚಿ. ಆಗ ಯೂನಿಕೋಡ್ ಕಿಡಕಿ ಮತ್ತು ANSI ಕಿಡಕಿಗಳು ಅಕ್ಕಪಕ್ಕಕ್ಕೆ ಬರುತ್ತವೆ.
9. ANSI ಪಠ್ಯವನ್ನ ಯೂನಿಕೋಡ್ ಗೆ ತರಲು "A-ಅ" ಎಂದು ಸರಳ ನೀಲಿ ಬಣ್ಣದಲ್ಲಿ ಸೂಚಿಸಿರುವ ಗುಂಡಿಯನ್ನ ಒತ್ತಬೇಕು.
10.ಯೂನಿಕೋಡ್ ಪಠ್ಯವನ್ನ "TXT" ಅಥ್ವ "HTML" ಕಡತವಾಗಿಯೂ ಭಿನ್ನವಾಗಿ ಉಳಿಸಿಕೊಳ್ಳಬಹುದು.
ಒಂದು ಅಂಶವನ್ನ ಗಮನಸಿರಿ, ಆನ್ಸಿ (ANSI) ಕಿಡಕಿಯು ತೆರೆದಿದ್ದಾಗ ಯೂನಿಕೋಡ್ ಕನ್ನಡ ಕಿಡಕಿಯಲ್ಲಿ ನೇರವಾಗಿ ಎಡಿಟ್ ಮಾಡಲು ಸಾದ್ಯವಿರುವುದಿಲ್ಲ. ANSI ಕಿಡಕಿಯನ್ನ ಮರೆಮಾಚಿ ಪುನಃ ನೇರವಾಗಿ ಯೂನಿಕೋಡ್ ಪಠ್ಯವನ್ನ ಎಡಿಟ್ ಮಾಡಿಕೊಳ್ಳಲೂ ಸಾದ್ಯವಿದ್ದೇ ಇರುತ್ತೆ.
ಕೆಲವು ವಿಶೇಷ ಸನ್ನಿವೇಶಗಳು:
1. ಸಾಮಾನ್ಯವಾಗಿ ಪದಗಳ ಮದ್ಯೆದಲ್ಲಿ ಬರುವ ಅರ್ಧಾಕ್ಷರಗಳು, ಮುಂದಿನ ಅಕ್ಷರದೊಂದಿಗೆ ಬೆರೆತು ಕೊಳ್ಳುತ್ತವೆ. ಉದಾಹರಣೆಗೆ "ಬೆಂಗಳೂರ್ನಲ್ಲಿ". ನೀವು ಇಲ್ಲಿ ಗಮನಿಸಿ "ಬೆಂಗಳೂರ್ ನಲ್ಲಿ" ಎಂದು ಬರೆಯಬೇಕಾಗುತ್ತದೆ. "ರ್" ಮತ್ತೆ "ನ" ಅಕ್ಷರಗಳ ಮದ್ಯೆದಲ್ಲಿ ಒಂದು ಸಣ್ಣ ಬಿಳಿ ಜಾಗ(SPACE) ತರಲೇ ಬೇಕಾಗುತ್ತೆ. ಇಲ್ಲದೇ ಹೋದರೆ "ಬೆಂಗಳೂರ್ನಲ್ಲಿ" ಎಂದಾಗಿ ಬಿಡುತ್ತದೆ. ಲೋಹಿತಂತ್ರಾಂಶದಲ್ಲಿ ಈ ರೀತಿಯ ಲೋಪಗಳನ್ನ ಸರಿಪಡಿಸ ಬೇಕೆಂದಿದ್ದಲ್ಲಿ, ನೀವು ಅನುಸರಿಸಬೇಕಾದ ವಿಧಾನ ಇಷ್ಟೇ. ಎಂದಿನಂತೆ ಮೊದಲಿಗೆ "ಬೆಂಗಳೂರ್" ಎಂದು ಬರೆಯಿರಿ, ನಂತರ ಒಂದು ಬಿಳಿ ಜಾಗ ಬಿಡುವ ಬದಲಿಗೆ "x" ಕೀಲಿಯನ್ನ ಒತ್ತಿ. ನಂತರ "ನಲ್ಲಿ" ಎಂದು ಬರೆಯಿರಿ. ಆಗ "ಬೆಂಗಳೂರ್‌ನಲ್ಲಿ" ಎಂದು ಸರಿಯಾಗಿ ಕಾಣಿಸುತ್ತದೆ.
ನೀವು ಒಮ್ಮೆ "x" ಒತ್ತಿದರೆ ಸಾಕು. ಇಲ್ಲಿ "x" ಕೀಲಿ ಒತ್ತಿದಾಗ ಯಾವ ಅಕ್ಷರವೂ ನಿಮ್ಮ ಪರದೆಯ ಮೇಲೆ ಮೂಡುವುದಿಲ್ಲ.
ಆದರೆ ಅದರಿಂದ ಆಗುವ ಉಪಯೋಗವೇನೆಂದು ಈ ಮೇಲಿನ ಉದಾಹರಣೆಯೇ ಸ್ಪಷ್ಟಪಡಿಸುತ್ತದೆ ಎಂದು ಭಾವಿಸುತ್ತಿದ್ದೇನೆ.
2. ಗಣಕದಲ್ಲಿ ಕನ್ನಡದಲ್ಲಿ "RANK" ಎಂದು ಬರೆಯುವುದು ಅನೇಕ ತಂತ್ರಾಂಶಗಳಲ್ಲಿ ಸಾದ್ಯವಿಲ್ಲ. ಆದರೆ ಲೋಹಿತಂತ್ರಾಂಶದಲ್ಲಿ ಇದು ಸಾದ್ಯವಿದೆ. ಕೀಲಿಸರಣಿ = "rVyAM k". ಇಲ್ಲಿ "V" ಕೀಲಿಯನ್ನು ಗಮನಿಸಿ. "ರ್" ಎಂದು ಟೈಪಿಸಿಪ ನಂತರ "V" ಕೀಲಿಯನ್ನ ಒತ್ತಬೇಕು. "V" ಕೀಲಿ ಒತ್ತಿದಾಗ ಪರದೆ ಮೇಲೆ ಕೂಡಲೇ ಯಾವ ಅಕ್ಷರವೂ ಮೂಡುವುದಿಲ್ಲ. ಅಂದ ಮಾತ್ರಕ್ಕೆ ಅದರಿಂದ ಏನೂ ಪ್ರಯೋಜನವಿಲ್ಲವೆಂದಲ್ಲ. "ರ್" ನಂತರ "V" ಒತ್ತಿ ನಂತರ "y" ಒತ್ತಿದರೆ "ರ್" ಅಕ್ಷರಕ್ಕೆ "ಯ್" "ಒತ್ತು" ಬರುತ್ತದೆ.

ನೀವು "V" ಕೀಲಿಯನ್ನ ಬಳಸದೇ ಹೋದರೆ, "ರ್ಯ" ಎಂದಾಗುತ್ತದೆ. ಇಲ್ಲಿ "V" ಕೀಲಿಯಿಂದ ಆದ ಬದಲಾವಣೆ ಏನೆಂದು ನೀವೂ ಗಮನಿಸಿದಿರೆಂದು ಭಾವಿಸುತ್ತೇನೆ.
"x", "V" ಈ ಎರ್ಡೂ ಕೀಲಿಗಳ ವಿಶೇಷತೆಯನ್ನ ನೀವು ಗ್ರಹಿಸಿದ್ದೀರೆಂದು ಭಾವಿಸಿಕೊಳ್ಳುತ್ತಿದ್ದೇನೆ.
3. ಜ್ಞಾನ ಎಂದು ಬರೆಯಲು jzAna ಎಂದು ಬರೆಯಿರಿ. ಇಲ್ಲಿ ನೀವು ಗಮನಿಸ ಬೇಕಾದ ಅಂಶವೇನೆಂದರೆ j = ಜ್ ಹಾಗೂ z = ಞ್.
ಇದೇ ರೀತಿ "ಙ್ = Z" ಕೀಲಿಯನ್ನ ಬಳಸಿಕೊಳ್ಳಿ.
ಮೇಲಿನ ಯಾವುದೇ ವಿವರಣೆಗಳನ್ನ ಗ್ರಹಿಸಲು ನಿಮಗೆ ಗೊಂದಲವುಂಟಾದಲ್ಲಿ ನನಗೆ ಮಿನ್ನೋಲೆಯನ್ನ ಕಳುಹಿಸ ಬಹುದು. ಆಗ ಮತ್ತೊಮ್ಮೆ, ಇನ್ನಾವುದಾದರೂ ಭಿನ್ನ ಉದಾಹರಣೆಯನ್ನ ತೆಗೆದುಕೊಂಡು ವಿವರಿಸಲು ಪ್ರಯತ್ನಿಸುತ್ತೇನೆ.
ಒಂದು ಕಿವಿಮಾತು. (hint)
autocompletion ಸೌಲಬ್ಯದ ಬಗ್ಗೆ ನೀವೀಗಾಗಲೇ ತಿಳಿದಿದ್ದೀರಿ.
ತಂತ್ರಾಂಶದ ಆಂತರಿಕ ಶಬ್ಧಕೋಶದಲ್ಲಿ ಈಗಾಗಲೇ ಅಂದಾಜು ೪೦ ಸಾವಿರಕಿಂತಲೂ ಅಧಿಕ ಶಬ್ಧಗಳಿವೆ.
ಆದರೂ ನೀವು ಯತೇಚ್ಚು ಬಳಸುವ ಪದಗಳು Dictionary ನಲ್ಲಿ ಇಲ್ಲದೇ ಇರುವ ಸಾದ್ಯತೆಗಳಿವೆ.
ಅಂತಹ ಶಬ್ಧಗಳನ್ನ Dictionary ಗೆ ಸೇರಿಸಿಕೊಳ್ಳಬಹುದು.
ತಂತ್ರಾಂಶವನ್ನ ಬಳಸಲು ಆರಂಬಿಸಿದ ಅರಂಬದ ದಿನಗಳಲ್ಲಿ, ನೀವು ಹೆಚ್ಚು ಬಳಸುವ ಪದಗಳನ್ನ ಗುರುತಿಸಿ ಕೊಂಡು, ಅವುಗಳೇಲ್ಲವನ್ನೂ Dictionary ಗೆ ಸೇರಿಸಿ ಕೊಳ್ಳಿ. ಈ ರೀತಿ ನೀವೇ ಸೇರಿಸಿಕೊಂಡ ಸಬ್ಧಗಳು ಸಹ ಪದ-ಪೂರ್ತಿ (auto-completion) ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆರಂಬದ ಎರ್ಡು ಅಕ್ಷರಗಳನ್ನ ಒತ್ತಿದ ಕೂಡಲೇ ಪಟ್ಟಿ ತೆರೆದು ಕೊಳ್ಳುತ್ತೆ.
ಈ ಮೂಲಕ ಗಣಕದಲ್ಲಿ ಕನ್ನಡದಲ್ಲಿ ಟೈಪಿಸುವಾಗ ಹಿಂದೆಂದಿಗಿಂತಲೂ ಹೆಚ್ಚು ವೇಗವನ್ನ ಸಾಧಿಸ ಬಹುದು.
ನಿಮ್ಮದೇ ಶಬ್ಧಗಳನ್ನ ಶಬ್ಧಕೋಶಕ್ಕೆ ಸೇರಿಸಿಕೊಳ್ಳುವುದು ಹೇಗೆ?
೧. ಶಭ್ದದ ಮೇಲೆ ನಿಮ್ಮ ಗಣಕದ ಇಲಿಯ ಬಲ ಮೂಲೆಯನ್ನ ಚುಚ್ಚಿ.
(right click on the word you want to add to dictionary)
೨. ಈ ಶಭ್ದವು ಶಬ್ಧಕೋಶದಲ್ಲಿ ಈಗಾಗಲೇ ಇಲ್ಲವೆಂದಾದಲ್ಲಿ, "Add to Dictionary"
ಎಂದು ಸೂಚಿಸುವ ಮೆನು-ಐಟಮ್ ಕಾಣಿಸುತ್ತದೆ. ಕೆಳಗಿನ ಚಿತ್ರವನ್ನ ಒಮ್ಮೆ ಗಮನಿಸಿ.

೩. ಈಗ ಆ ಮೆನು ಮೇಲೆ ಕ್ಲಿಕ್ಕಿಸಿದರೆ ಮುಗಿಯಿತು. ಈ ಶಬ್ಧವು ನಿಮ್ಮ ಶಬ್ಧಕೋಶಕ್ಕೆ ಸೇರ್ಪಡೆಯಾದಂತೆ.
೪. ಲೋಹಿತಂತ್ರಾಂಶದಲ್ಲಿ ಇನ್ನು ಮುಂದೆ ನೀವು ಈ ಶಬ್ಧವನ್ನ ಬರೆಯುವಾಗ ಪದ-ಪೂರ್ತಿ ಪಟ್ಟಿಯನ್ನ ಗಮನಿಸಿ.
೫. ನಿಮ್ಮ ಶಬ್ಧ ಆ ಪಟ್ಟಿಯಲ್ಲಿ ಬಂದಿರುತ್ತದೆ. ಈ ಒಂದು ಬಾರಿ ಮಾತ್ರ ಅಲ್ಲ.
ನೀವು ಒಂದು ವಾರದ ನಂತರ ಬಂದು ಮತ್ತೆ ಆ ಶಬ್ಧವನ್ನ ಟೈಪಿಸಲು ಪ್ರಯತ್ನಿಸಿ ನೋಡಿ.
ಈಗಲೂ ನಿಮ್ಮ ಶಬ್ಧ ಪದ-ಪೂರ್ತಿ ಪಟ್ಟಿಯಲ್ಲಿ ಬಂದಿರುತ್ತದೆ/ಬಂದಿರಲೇ ಬೇಕು.
ನಿಮ್ಮ ಪ್ರೋತ್ಸಾಹ ಇದೇ ರೀತಿ ಸದಾ ಇರಲಿ.
ವಂದನೆಗಳೊಂದಿಗೆ...
|